"ಕೊಪ್ಪಳದ ನೀರ್ ಸಾಬ"

ಜನತೆಗೆ ಮೂಲಭೂತ ಅವಶ್ಯಕ ಕುಡಿಯುವ ನೀರಿನ ಸೇವೆ .. ಜನತೆ ಕೆ.ಎಂ.ಸಯ್ಯದ್ ರನ್ನು ಕರೆಯುವುದು "ಕೊಪ್ಪಳದ ನೀರ್ ಸಾಬ" ಎಂದು....ಪ್ರಥಮ ಬಾರಿಗೆ ಕೊಪ್ಪಳದ ಅಟೋಡ್ರೈವರ್ ಗಳಿಗೆ ಸಮವಸ್ತ್ರ ವಿತರಣೆ.... ಅವರಿಗಾಗಿ ಅಟೋ ಸ್ಟಾಂಡ್ ನಿರ್ಮಾಣ...ಯುವ ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ವಿವಿದ ಆಟೋಟಗಳ ಸ್ಪರ್ಧೆಗಳ ಆಯೋಜನೆ ಮತ್ತು ಪ್ರಾಯೋಜಕತ್ವ.....ವಿವಿದ ಸಂಘ ಸಂಸ್ಥೆಗಳಿಗೆ ಧನಸಹಾಯ... ಬಡ ಮಹಿಳೆಯರಿಗೆ ಸೀರೆ ವಿತರಣೆ...

Friday, May 3, 2013

ಅಭ್ಯರ್ಥಿ ಕೆ.ಎಂ.ಸಯ್ಯದ್ ಪರ ಕೆಜೆಪಿಯಿಂದ ಕೊಪ್ಪಳದಲ್ಲಿ ಬೈಕ್ ರ್‍ಯಾಲಿ



ಕೊಪ್ಪಳ,ಮೇ.೦೩: ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಕೊನೆ ದಿನವಾದ ಶುಕ್ರವಾರ ಸುಡು ಬಿಸಿಲನ್ನೂ ಲೆಕ್ಕಿಸದೆ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಪ್ರಮುಖ ರಸ್ತೆಗಳಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬನ್ನಿಕಟ್ಟಿಯಿಂದ, ಸಾರ್ವಜನಿಕ ಮೈದಾನದವರೆಗೆ ಬೈಕ್ ರ್‍ಯಾಲಿ ನಡೆಸಿ ನಂತರ ಸಾರ್ವಜನಿಕ ಮೈದಾನದಲ್ಲಿ ಏರ್ಪಡಿಸಿದ ಬೃಹತ್ ಬಹಿರಂಗ ಸಭೆ ನಡೆಸಿ ಮತಯಾಚಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. 
ನಗರದಲ್ಲೇಡೆ  ಜನಸಾಗರವೇ ಕಾಣುತಿತ್ತು. ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಶುಕ್ರವಾರ ಅಬ್ಬರದ ಪ್ರಚಾರದಲ್ಲಿ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ಗೆ ಸಾತ್ ನೀಡಿದರು.   ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ತಮ್ಮ ಅಭ್ಯರ್ಥಿಯ ಪರ ಜಯ ಘೋಷಗಳನ್ನು ಕೂಗಿದರು. ನಂತರ ಸಾರ್ವಜನಿಕ ಮೈದಾನದಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಮಾತನಾಡಿ, ಬಿಎಸ್‌ವೈ ಬೆಂಬಲಿಸಿ ಕೆಜೆಪಿ ಗೆಲ್ಲಿಸಿ ಎಂದು ಅಭ್ಯರ್ಥಿ ಕೆ.ಎಂ.ಸಯ್ಯದ್ ಮನವಿ ಮಾಡಿಕೊಂಡರು. 
ಪಕ್ಷದ ತಾಲೂಕ ಅಧ್ಯಕ್ಷ ಪ್ರಫುಲ್ ಗೌಡ ಹುರಕಡ್ಲಿ, ಪ್ರಚಾರ ಸಮಿತಿ ಅಧ್ಯಕ್ಷ ನೇಮಿರಾಜ ಪಾಟೀಲ್, ಮುಖಂಡರಾದ ಈಶ್ವರ ಎನ್., ಶ್ಯಾಮೀದ್ ಸಾಬ ಕಿಲ್ಲೇದಾರ, ಮೆಹಬೂಬ ಮುಲ್ಲಾ, ಸಿ.ಎಸ್.ಡಂಬಳ, ಮಾರುತಿ ಮಾಗಳದ್, ಮಹೆಬೂಬ ಬಹದ್ದೂರಬಂಡಿ, ಮಲ್ಲಿಕಾರ್ಜುನ ಒದಗನಾಳ, ಬಸವರಾಜ ಬಳ್ಳಾರಿ ಅಳವಂಡಿ, ಶ್ರೀಮತಿ ರೇಣುಕಾ, ಹನುಮಂತ ಕಲಿಕೇರಿ, ಡಿ.ಕೆ.ಹಿರೇಮಠ, ಲಕ್ಷ್ಮಣ ಕವಲೂರು, ಪರಸಪ್ಪ ಲಮಾಣಿ, ಯಮನೂರಪ್ಪ ಹಾಗೂ ಪಕ್ಷದ ಹಿರಿಯ ಮುಖಂಡ ಹಾಜಿ ಸಯ್ಯದ್ ಹಜರತ್ ಪಾಷಾ ಖಾದ್ರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

Thursday, May 2, 2013

ಕೆಜೆಪಿ ರೋಡ್ ಶೋ


ಕೊಪ್ಪಳ,ಮೇ.೦೨: ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಯ್ಯದ್ ಫೌಂಡೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಕೆ.ಎಂ.ಸಯ್ಯದ್‌ರವರು ಚುನಾವಣೆ ಪ್ರಯುಕ್ತ ದಿ.೦೩ ರ ಶುಕ್ರವಾರ ಕೊಪ್ಪಳ ನಗರದಲ್ಲಿ ಬೃಹತ್ ರೋಡ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಚುನಾವಣೆಗೆ ಸ್ಪರ್ಧೆಬಯಸಿ ತಮ್ಮ ಉಮೇದುವಾರಿಕೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಇತ್ತೀಚಿಗೆ ಕೊಪ್ಪಳ ನಗರದಲ್ಲಿ ಬೃಹತ್ ಸಂಖ್ಯೆಯ ಕಾರ್ಯಕರ್ತ ಅಭಿಮಾನಿಗಳೊಂದಿಗೆ ರೋಡ್ ಶೋ ಮೂಲಕ ಮೆರವಣಿಗೆ ನಡೆಸಲಾಗಿದ್ದು ಅದರಂತೆಯೆ ಚುನಾವಣೆ ಪ್ರಚಾರ ಪ್ರಯುಕ್ತ ದಿ.೦೩ ರ ಶುಕ್ರವಾರದಂದು ಬೃಹತ್ ರೋಡ್ ಶೋ ನಡೆಸಲು ಪಕ್ಷ ತೀರ್ಮಾನಿಸಿದೆ. ಇದರಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧೀಕ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೆಜೆಪಿ ಪಕ್ಷದ ಅಭ್ಯರ್ಥಿ ಕೆ.ಎಂ.ಸಯ್ಯದ್ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.

ಕೆಜೆಪಿ ಬೆಂಬಲಿಸಿ : ಮೂಲಿಮನಿ


ರಾಜ್ಯದ ಘನತೆಗೆ ಧಕ್ಕೆ ತಂದಿರುವ ಬಿಜೆಪಿ ತೀರಸ್ಕರಿಸಿ, ಹಿತ ಕಾಪಾಡಲು ಮುಂದಾದ ಕೆಜೆಪಿ ಬೆಂಬಲಿಸಿ : ಮೂಲಿಮನಿ
ಕೊಪ್ಪಳ,ಮೇ.೦೨: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಎಲ್ಲಾ ಕ್ಷೇತ್ರದಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದು ನಾಡಿನಲ್ಲಿ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಹಲವಾರು ಹಗರಣದಲ್ಲಿ ಭಾಗಿಯಾಗು
ವುದರ ಮೂಲಕ ರಾಜ್ಯದ ಘನತೆಗೆ ಧಕ್ಕೆ ತಂದಿರುವ ಬಿಜೆಪಿ ತೀರಸ್ಕರಿಸಿ ರಾಜ್ಯದ ಹಿತ ಕಾಪಾಡಲು ಕೆಜೆಪಿ ಪಕ್ಷವನ್ನು ಬೆಂಬಲಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಪ್ಪಳ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಡಿ.ನಜೀರ್ ಸಾಬ ಮೂಲಿಮನಿ ಜನತೆಗೆ ಕರೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೆಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ನಮ್ಮ ರಾಜ್ಯ ರೈತ ಸಂಘ ಬೆಂಬಲ ನೀಡಿದ್ದು, ಅದರಂತೆ ಕೊಪ್ಪಳ ಜಿಲ್ಲೆಯಲ್ಲಿಯೂ ಕೂಡ ಕೆಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಈಗಾಗಲೇ ಕ್ಷೇತ್ರದಲ್ಲಿ ಸಂಚಾರ ಕೈಗೊಳ್ಳಲಾಗಿದೆ. ಎಲ್ಲೇಡೆ ಜನರಿಂದ ಅದರಲ್ಲೂ ವಿಶೇಷವಾಗಿ ರೈತ ಸಮುದಾಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದರು. 
ಮುಂದುವರೆದು ಮಾತನಾಡಿದ ಅವರು, ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರು ಕೊಪ್ಪಳದಲ್ಲಿ ಸಯ್ಯದ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಎಂಬ ಸ್ವಯಂ ಸೇವಾ ಸಂಸ್ಥೆ ರಚನೆ ಮಾಡಿಕೊಂಡು ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಕ್ರಿಯವಾಗಿ ಬಡವರ, ದೀನದಲಿತರ, ಅಲ್ಪಸಂಖ್ಯಾತರ ಮತ್ತು ಸರ್ವ ಜನಾಂಗದ ಸಮಸ್ಯೆಗಳಿಗೆ ನೇರ ಸ್ಪಂಧನೆ ಮಾಡುವುದರ ಮೂಲಕ ಸಹಾಯ, ಸಹಕಾರ ನೀಡುತ್ತ ಬಂದಿರುವ ಅವರ ಸಮಾಜ ಸೇವಾ ಕಾರ್ಯಕ್ರಮಗಳಿಗೆ ಬೆಂಬಲಿಸಿ ಅವರ ಕೆಲಸ ಕಾರ್ಯಗಳನ್ನು ಮೆಚ್ಚಿ ಅವರಿಗೆ ನಮ್ಮ ಸಂಘದ ಬೆಂಬಲ ಘೋಷಿಸಿ ಅವರ ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆನೆ ಎಂದ ಅವರು, ಕ್ಷೇತ್ರದ ಜನತೆ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರಿಗೆ ಆಯ್ಕೆ ಮಾಡಿಕೊಳ್ಳಲು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಪ್ಪಳ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಡಿ.ನಜೀರ್ ಸಾಬ ಮೂಲಿಮನಿ ಕರೆ ನೀಡಿದರು. ಈ ಸಂದರ್ಭದಲ್ಲಿ ಮಹೆಬೂಬ ಮುಲ್ಲಾ, ಯಮನಪ್ಪ ಬಾರಕೇರ, ಕಳಕಪ್ಪ ರಾತೋಡ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಭುತ್ವದಲ್ಲಿ ಮತದಾರನಿಗೆ ಅತ್ಯುನ್ನತ ಸ್ಥಾನ : ಸಯ್ಯದ್



ಕೊಪ್ಪಳ,ಮೇ.೦೨: ನಮ್ಮ ದೇಶದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ನಮ್ಮ ದೇಶದ  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರನಿಗೆ ಅತ್ಯುನ್ನತ ಸ್ಥಾನ ಇದ್ದು ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರು ಯೋಚನೆ ಮಾಡಿ ಅರ್ಹ ವ್ಯಕ್ತಿಗೆ ಆಯ್ಕೆ ಮಾಡಿಕೊಳ್ಳುವುದು ಮತದಾರನ ಜವಾಬ್ದಾರಿಯಾಗಿದೆ. ಅದನ್ನು ಈ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಮ್ಮ ಮತ ಒಳ್ಳೆಯ   ಅಭ್ಯರ್ಥಿ ಕ್ಷೇತ್ರದ ಜನಸಾಮಾನ್ಯರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವ್ಯಕ್ತಿಯನ್ನು ಆರಿಸಿತರಬೇಕೆಂದು ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಮನವಿ ಮಾಡಿಕೊಂಡರು.
ಅವರು ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ ಗ್ರಾಮಸ್ಥರ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿರುವ ತಮಗೆ ಬೆಂಬಲಿಸುವಂತೆ ಹಾಗೂ ಬಿಎಸ್‌ವೈನವರ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಈ ಚುನಾವಣೆಯಲ್ಲಿ ತಮಗೆ ಆಯ್ಕೆ ಮಾಡುವುದರ ಮೂಲಕ ಅದನ್ನು ಮುಂದುವರೆಸಿಕೊಂಡು ಹೋಗಲು ಒಂದು ಅವಕಾಶ ಕೊಡಬೇಕೆಂದು ಅವರು ಮನವಿ ಮಾಡಿಕೊಂಡರು.
ಮುಂದುವರೆದು ಮಾತನಾಡಿದ ಅವರು, ಕೆಜೆಪಿ ಪಕ್ಷದ್ದು ಅಭಿವೃದ್ದಿ ಪರ ರಾಜಕೀಯವಾಗಿದ್ದು, ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ನಾಡಿನ ಜನರ ಹಿತ ಕಾಪಾಡುವುದೇ ಅವರ ಧ್ಯೇಹವಾಗಿದ್ದು, ಅವರ ಜನಪರ ಕಾರ್ಯಕ್ರಮಗಳಿಗೆ ಜನಮನ್ನಣೆ ಈ ಚುನಾವಣೆಯಲ್ಲಿ ಸಿಗಲಿದೆ. ರಾಜ್ಯದಲ್ಲಿ ಮತ್ತು ಕ್ಷೇತ್ರದಲ್ಲಿ ಈಗ ಬದಲಾವಣೆಯ ಕಾಲ ಬಂದಿದೆ. ಸಾಮಾಜಿಕ ನ್ಯಾಯ ಪಾಲನೆಯಲ್ಲಿ ನಮ್ಮ ಕೆಜೆಪಿ ಪಕ್ಷ ಅತ್ಯಂತ ಕಾಳಜಿವಹಿಸಿದೆ.  ಕೊಪ್ಪಳ ಕ್ಷೇತ್ರದಲ್ಲಿ ಈಗಾಗಲೇ ತಮ್ಮ ವೈಯಕ್ತಿಕವಾಗಿ ಸಾಕಷ್ಟು ಜನಸೇವೆ, ಸಾಮಾಜಿಕ ಕಾರ್ಯಚಟುವಟಿಕೆ ಮಾಡಲಾಗಿದ್ದು ಅದನ್ನೇ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಲು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮಗೆ ಬೆಂಬಲಿಸಬೇಕೆಂದರು.
ಕ್ಷೇತ್ರದ ಜನತೆಗೆ ಉಚಿತ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಕಾರ್ಯ ಚುನಾವಣೆ ನಂತರವೂ ಮುಂದುವರೆಸುವೆ ಬಡ ಹೆಣ್ಣುಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ, ಅರ್ಹ ಯುವಕ/ಯುವತಿಯರಿಗೆ ಕಂಪ್ಯೂಟರ್ ವಿತರಣೆ, ಪ್ರತಿವರ್ಷ ಸಾಮೂಹಿಕ ವಿವಾಹಗಳಿಗೆ ಸಹಾಯ ಮತ್ತು ಪ್ರೋತ್ಸಾಹ ಮಾಡುತ್ತ ಬಂದಿದ್ದು, ಈ ಭಾಗದ ಜನರಿಗೆ ತಿಳಿದ ವಿಷಯವಾಗಿದ್ದು ಇಂತಹ ಅನೇಕ ಜನಪರ, ಜನಸೇವೆ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ಈ ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡುವುದರ ಮೂಲಕ ಸಹಕಾರ ನೀಡಬೇಕೆಂದು ಕೊಪ್ಪಳದ ಜನತೆಗೆ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಮನವಿ ಮಾಡಿಕೊಂಡಿದ್ದಾರೆ. 
ಈ ಸಂದರ್ಭದಲ್ಲಿ ಪಕ್ಷದ ತಾಲೂಕ ಅಧ್ಯಕ್ಷ ಪ್ರಫುಲ್ ಗೌಡ ಪಾಟೀಲ್ ಹುರಕಡ್ಲಿ, ಪ್ರಚಾರ ಸಮಿತಿ ಅಧ್ಯಕ್ಷ ನೇಮರಾಜ ಪಾಟೀಲ್, ಯುವ ನಾಯಕ ವಾಗ್ಮಿ ಮೆಹಬೂಬ ಮುಲ್ಲಾ ಹನಮಸಾಗರ, ಮುಖಂಡರಾದ ಈಶ್ವರ ಎನ್, ಶ್ಯಾಮೀದ್ ಸಾಬ ಕಿಲ್ಲೇದಾರ, ಸಿ.ಎಸ್.ಡಂಬಳ, ಮಹೆಬೂಬ ಬಹದ್ದೂರಬಂಡಿ, ಮಲ್ಲಿಕಾರ್ಜುನ ವದಗನಾಳ, ಬಸವರಾಜ ಬಳ್ಳಾರಿ ಅಳವಂಡಿ, ಪರಸಪ್ಪ ಲಮಾಣಿ, ಲಕ್ಷ್ಮಣ ಕವಲೂರು, ಯಮನೂರಪ್ಪ, ಹನುಮಂತ ಕಲಿಕೇರಿ ಹಾಗೂ ಬಿ.ಕೆ.ಹಿರೇಮಠ ಅಗಳಕೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Sunday, April 28, 2013

ಕೊಪ್ಪಳದಲ್ಲಿ ಬದಲಾವಣೆಯ ಕಾಲ ಸನ್ನಿಹತವಾಗಿದೆ : ಮುಲ್ಲಾ




ಕೊಪ್ಪಳ,ಏ.೨೮: ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ದಿಗಾಗಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸುಮಾರು ಕೋಟಿ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಆ ಹಣ ಎಲ್ಲಿ ಹೋಯಿತು, ಯಾರ ಜೇಬಿಗೆ ಸೇರಿತು ಎಂಬುವುದೇ ತಿಳಿಯದಂತಾಗಿದೆ. ಆದರೆ ಅಭಿವೃದ್ದಿ ಮಾತ್ರ ಮರೆಚಿಕೆಯಾಗಿದಂತಾಗಿದೆ. ಅದನ್ನು ಈ ಭಾಗದ ಪವಿತ್ರ ಶ್ರೀ ಹುಲಿಗೆಮ್ಮ ದೇವಿಯೇ ನೋಡಿಕೊಳ್ಳಲಿ ಮತ್ತು ಅಂತವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದರ ಮೂಲಕ ತಪ್ಪಿತಸ್ಥರಿಗೆ ಶಿಕ್ಷಿಸಲಿ ಎಂದು ಕೆಜೆಪಿ ಪಕ್ಷದ ಯುವ ನಾಯಕ ವಾಗ್ಮಿ ಮೆಹಬೂಬ್ ಮುಲ್ಲಾ ಹನುಮಸಾಗರ ಅವರು ಹೇಳಿದರು.
ಅವರು ತಾಲೂಕಿನ ಇತಿಹಾಸ ಪ್ರಸಿದ್ಧ ಹುಲಗಿ ಗ್ರಾಮದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರ ಪರ ಏರ್ಪಡಿಸಿದ ಬಹಿರಂಗ ಮತಯಾಚನೆ ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಉಪಚುನಾವಣೆಯ ಮುನ್ನ ಮತ್ತು ನಂತರ ಬಿಡುಗಡೆಗೊಂಡ ಸರಕಾರದ ಅನುದಾನದಲ್ಲಿ ಬಹುತೇಕವಾಗಿ ಸದುಪಯೋಗವಾಗದೇ ದುರುಪಯೋಗವೇ ಜಾಸ್ತಿ ಎಂದು ಆರೋಪಿಸಿದ ಅವರು, ಈಗ ಕೊಪ್ಪಳದಲ್ಲಿ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಅಧಿಕಾರವಿಲ್ಲದೇ ಜನರ ಸೇವೆ ಮಾಡುತ್ತ ಬಂದಿರುವ ಕೆ.ಎಂ.ಸಯ್ಯದ್‌ರವರಿಗೆ ಈ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಇನ್ನು ಹೆಚ್ಚಿನ ರೀತಿಯಲ್ಲಿ ಜನರ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದ ಅವರು, ವಿಶ್ವ ಮಾನವ ಮಹಾ ಮಾನವತಾವಾದಿ ಬಸವಣ್ಣನವರ ಕನಸು ನನಸಾಗಿಸಲು ಯಡಿಯೂರಪ್ಪನವರಿಗೆ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೆ.ಎಂ.ಸಯ್ಯದ್‌ರವರನ್ನು ಕೊಪ್ಪಳ ಕ್ಷೇತ್ರದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಾಮಾಜಿಕ ನ್ಯಾಯ ಡಾ.ಬಿ.ಆರ್.ಅಂಬೇಡ್ಕರರವರ ತತ್ವ ಪಾಲಿಸುವುದರ ಜೊತೆಗೆ ಶ್ರಮಿಸಲು  ಯುವ ಶಕ್ತಿಗೆ ಅಧಿಕಾರ ನೀಡಬೇಕು ಎಂದರು. ನಮ್ಮ ಕೆಜೆಪಿ ಪಕ್ಷದ ಗುರುತು ತೆಂಗಿನಕಾಯಿ ಪೂಜೆಗೆ ಬಹಳ ಶ್ರೇಷ್ಠವಾಗಿದೆ ಮತದಾನವೆಂದರೆ ಅತ್ಯಂತ ಪವಿತ್ರವಾಗಿದ್ದು, ಅದು ಕನ್ಯಾದಾನಕ್ಕೆ ಸಮಾನ ಅದಕ್ಕಾಗಿ ಯೋಚಿಸಿ ಅರ್ಹ ವ್ಯಕ್ತಿಗೆ ಮತ ನೀಡಬೇಕು ಮತದಾನ ಮಾರಾಟಕಲ್ಲ. ಅದನ್ನು ಅರಿತುಕೊಂಡು ಮತದಾನ ಮಾಡಬೇಕು. ಕೊಪ್ಪಳದ ಜನರು ಬುದ್ದಿ ಜೀವಿಗಳು, ಚಾಣಾಕ್ಷತದಿಂದ ಈ ಬಾರಿ ಮತ ನೀಡಿ ಅರ್ಹ ವ್ಯಕ್ತಿಗೆ ಆಯ್ಕೆ ಮಾಡಲು ಮುಂದಾಗಬೇಕೆಂದು ಕೆಜೆಪಿ ಪಕ್ಷದ ಯುವ ನಾಯಕ ವಾಗ್ಮಿ ಮೆಹಬೂಬ್ ಮುಲ್ಲಾ ಹನುಮಸಾಗರ ಹೇಳಿದರು.
ಈ ಸಂದರ್ಭದಲ್ಲಿ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಮಾತನಾಡಿ, ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ತಮ್ಮನ್ನು ಬೆಂಬಲಿಸುವಂತೆ ಜನತೆಗೆ ಮನವಿ ಮಾಡಿಕೊಂಡರು. ಪಕ್ಷದ ತಾಲೂಕ ಅಧ್ಯಕ್ಷ ಪ್ರಫುಲ್ ಗೌಡ ಹುರಕಡ್ಲಿ, ಪ್ರಚಾರ ಸಮೀತಿ ಅಧ್ಯಕ್ಷ ನೇಮರಾಜ ಪಾಟೀಲ್, ಮುಖಂಡರಾದ ಈಶ್ವರ ಎನ್., ಶ್ಯಾಮೀದ್‌ಸಾಬ ಕಿಲ್ಲೇದಾರ, ಸಿ.ಎಸ್.ಡಂಬಳ, ಮಾರುತಿ ಮಾಗಳದ, ಮೆಹಬೂಬ ಬಹದ್ದೂರಬಂಡಿ, ಮಲ್ಲಿಕಾರ್ಜುನ ವದಗನಾಳ, ಬಸವರಾಜ ಬಳ್ಳಾರಿ ಅಳವಂಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. 

Friday, April 26, 2013

ಕೆಜೆಪಿಯಿಂದ ನಾಡಿನ ಸಮಗ್ರ ಅಭಿವೃದ್ದಿ ಸಾಧ್ಯ


ಕೊಪ್ಪಳ,ಏ.೨೫: ನಾಡಿನ ಸರ್ವಾಂಗೀಣ ಅಭಿವೃದ್ದಿಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷಕ್ಕೆ ಬೆಂಬಲಿಸಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿಕೊಡಬೇಕು. ಅಂದಾಗ ಮಾತ್ರ ನಾಡಿನ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಪಕ್ಷದ ಯುವ ನಾಯಕ ಮೆಹಬೂಬ್ ಮುಲ್ಲಾ ಅಭಿಪ್ರಾಯ ಪಟ್ಟರು.
ಅವರು ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಏರ್ಪಡಿಸಿದ ಕೆಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರ ಬಹಿರಂಗ ಮತಯಾಚನೆ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತ, ಕೆ.ಎಂ. ಸಯ್ಯದ್ ರವರು ಕಳೆದ ೩-೪ ವರ್ಷಗಳಿಂದ ಕೊಪ್ಪಳದಲ್ಲಿ ತಮ್ಮದೇಯಾದ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿಕೊಂಡು ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡುತ್ತ ಜನಸಾಮಾನ್ಯರ ಪ್ರೀತಿ, ವಿಶ್ವಾಸಗಳಿಸುವಲ್ಲಿ ಯಶಸ್ವಿಯಾದ ಇವರು ಕೊಪ್ಪಳ ವಿಧಾನಸಭಾ ಚುನಾವಣೆ ೨೦೧೩ ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾಕಣಕ್ಕೆ ಧುಮೂಕಿದ್ದು,  ಕೊಪ್ಪಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ  ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು.
ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರು ಮಾತನಾಡುತ್ತ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಈ ಚುನಾವಣೆ ಸವಾಲಾಗಿ ಸ್ವೀಕರಿಸಲಾಗಿದ್ದು, ಚುನಾವಣೆ ಯುದ್ದವೀರರಿಗೆ ಹಬ್ಬವೇ ಹೊರತು ಭಯವಲ್ಲ ಎಂದ ಅವರು, ಸರ್ವರ ಸಹಕಾರದೊಂದಿಗೆ ಸ್ಪರ್ಧಿಸಿರುವ ಈ ಚುನಾವಣೆಯಲ್ಲಿ ಗೆಲ್ಲುವ ಧೃಢ ವಿಶ್ವಾಸವನ್ನು ವ್ಯಕ್ತಪಡಿಸಿದರು.  ಕೆಜೆಪಿ ಪಕ್ಷದ ಮುಖಂಡರಾದ ಪ್ರಫುಲ್‌ಗೌಡ ಹುರಕಡ್ಲಿ,  ಹಾಜಿ ಸಯ್ಯದ್ ಹಜರತ್ ಪಾಷಾ ಖಾದ್ರಿ, ನೇಮಿರಾಜ ಪಾಟೀಲ್, ಪರಸಪ್ಪ ರಾಠೋಡ್, ರೈತ ಸಂಘದ ಮುಖಂಡ ಹನುಮಂತಪ್ಪ ಕಲಿಕೇರಿ, ಯಮನೂರಪ್ಪ ಹಲಗೇರಿ, ದೇವಪ್ಪ ಮಾಗಳದ, ಶ್ಯಾಮೀದ್‌ಸಾಬ ಕಿಲ್ಲೇದಾರ, ಲಕ್ಷ್ಮಣ ಕವಲೂರು, ಪ್ರಭಾಕರ ಬಡಿಗೇರ, ಬಿ.ಕೆ.ಹಿರೇಮಠ ವಕೀಲರು ಹುಲಗಿ, ಈಶ್ವರ ಲಿಂಗಾಪುರ, ಸಿ.ಎಂ.ಡಂಬಳ, ಅಬ್ದುಲ್ ಅಜೀಜ್ ಮಾನ್ವಿಕರ್, ಎಂ.ಡಿ.ಆಸೀಫ್ ಕರ್ಕಿಹಳ್ಳಿ, ಮಾರುತಿ ಮಾಗಳದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಮತಯಾಚನೆ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

Monday, April 22, 2013

ಕೆಜೆಪಿ ಪಕ್ಷದಿಂದ ನಾಡಿನ ಸಮಗ್ರ ಅಭಿವೃದ್ದಿ : ಸಯ್ಯದ್


ಕೊಪ್ಪಳ,ಏ.೧೫:ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಇದು ನಮ್ಮ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷದಿಂದ ಮಾತ್ರ ಸಾಧ್ಯವಾಗಿದ್ದು, ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲು ಮತ್ತು ಈ ನಾಡಿನ ಸಮಗ್ರ ಅಭಿವೃದ್ದಿಗೆ ಕೆಜೆಪಿಗೆ ಬೆಂಬಲಿಸಬೇಕೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿ ಮಟ್ಟದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಿಗೆ ಭೇಟಿ ಮಾಡಿ ಮನೆಮನೆಗೆ ತೇರಳಿ ಮತಯಾಚನೆ ನಡೆಸಿದ ಬಳಿಕ ಅಳವಂಡಿ ಗ್ರಾಮದಲ್ಲಿ ಏರ್ಪಡಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ನಾಡಿನ ಜನಸಾಮಾನ್ಯರಿಗೆ ತಂದಿರುವ ಯೋಜನೆಗಳನ್ನು ಈ ನಾಡಿನ ಸಾರ್ವಜನಿಕರು ಮರೆಯುವುದಿಲ್ಲ. ಅವರ ಜನಪರ ಕಾರ್ಯಕ್ರಮಗಳೇ ಈ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್ ಹೇಳಿದರು. 
ಈ ಸಂದರ್ಭದಲ್ಲಿ ಮುಖಂಡ ನೇಮಿರಾಜ ಪಾಟೀಲ್, ಮಹೆಬೂಬ್ ಮುಲ್ಲಾ, ಶ್ಯಾಮೀದ್ ಸಾಬ ಕಿಲ್ಲೇದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.